Tuesday 11 September 2012

ದೇವರೆಲ್ಲಿದ್ದಾನೆ? ಭಾಗ-೪


ಕಳೆದ ಸಂಚಿಕೆಯಿಂದ

ದೇವರು ಇರುವುದೇ ನಿಜವಾಗಿದ್ದರೆ ಈ ಭೂಲೋಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಸುಮ್ಮನೆ ಕುಳಿತು ನೋಡಿ ಆನಂದಿಸುತ್ತಿದ್ದಾನೆಯೆ? ಅವನು ಇಲ್ಲಿ ನಡುಯುತ್ತಿರುವ ಅತ್ಯಾಚಾರ, ಅನಾಚಾರ, ಹಿಂಸಾಚಾರ, ದ್ವೇಷ, ಯುದ್ದ, ಮೋಸ, ಕಪಟ, ಕುಟಿಲತೆಗಳನ್ನು ಯಾಕೆ ನಿಯಂತ್ರಿಸಲಾಗುತ್ತಿಲ್ಲ? ಸಜ್ಜನರ ಮೇಲೆ ದುರ್ಜನರ ಆಕ್ರಮಣ ನಡೆಯುತ್ತಿದ್ದರೂ ಅವನು ಯಾಕೆ ಮೌನಿ? ಇಲ್ಲದಿದ್ದರೆ ಇಲ್ಲಿ ನಡೆಯುತ್ತಿರುವ ಎಲ್ಲವೂ ಅವನ ಒಪ್ಪಿಗೆಯ ಮೇಲೆಯೇ ನಡೆಯುತ್ತಿದೆಯೇ?

 ಅವನು ಯಾಕೆ ಸುಮ್ಮನೆ ಒಂದು ಬಾರಿ ಇಲ್ಲಿಗೆ ಬಂದು ಎಲ್ಲವನ್ನೂ ಸರಿಮಾಡಿ ಹೋಗಬಾರದು? ಹೀಗೆ ಜನಸಾಮಾನ್ಯರಾದ ನಮಗೆ ಅನೇಕ ಬಾರಿ ಆನಿಸುವುದುಂಟು. ದೇವರು ನಮ್ಮ ಮೊಬೈಲ್ ಮತ್ತು ಕಂಪ್ಯೂಟರ್ ನಲ್ಲಿ ಇರುವ ಆಪರೇಟಿಂಗ್ ಸಿಸ್ಟಮ್ ಥರ ಒಂದು ಕಾರ್ಯಕ್ರಮವನ್ನು ರೂಪಿಸಿ ಅದಕ್ಕೆ ಎಲ್ಲವನ್ನೂ ವಹಿಸಿಕೊಟ್ಟು ಇನ್ನೂ ಹೆಚ್ಚಿನ ಧ್ಯಾನಕ್ಕಾಗಿ ತಪಸ್ಸಿಗೆ ಕೂತಿರವನೇನು? ಒಂದಲ್ಲಾ ಒಂದು ದಿನ ಎಲ್ಲವೂ ಸರಿ ಹೋಗುತ್ತದೆ ಪ್ರಕೃತಿಯಲ್ಲಿ ಎಲ್ಲದಕ್ಕೂ ಪರಿಹಾರವಿದೆ, ಆಗ ಎಲ್ಲರೂ ಮತ್ತು ಎಲ್ಲವೂ ಸರಿ ಹೋಗುತ್ತದೆ ಎಂಬ ನಿರ್ಧಾರಕ್ಕೆ ಆ ದೇವನು ಬಂದಿರಬಹುದು ಎಂದು ಕಾಣುತ್ತದೆ. (ಮಿಕ್ಕಿದ್ದು ನಾಳೆಗೆ)

No comments:

Post a Comment