Thursday 1 November 2012

“ಮಾತಾಡಿ ಡಾಟ್ ಕಾಂ”


ವಿವಿಧ ಭಾಷೆಗಳ ಮುಖಾಂತರ ಕನ್ನಡವನ್ನು ಕಲಿಯುವುದಕ್ಕಾಗಿ ಡ್ರೀಮ್ಸ್ ಇನ್ಫ್ರಾ ಸಂಸ್ಥೆಯು www.mathadi.com ಎಂಬ ವಿಂಬಲೆ ತಾಣವನ್ನು ಹೊರ ತಂದಿದೆ. ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಮರಾಠಿ ಮತ್ತು ಮಲೆಯಾಳಂ ಸೇರಿದಂತೆ ವಿವಿಧ ಭಾಷೆಗಳಿಂದ ಕನ್ನಡವನ್ನು ಕಳಿಯಬಹುದೆಂದು ಪತ್ರಿಕಾ ಪ್ರಕಟಣೆಯ ಮೂಲಕ ಸಾರ್ವಜನರಿಗೆ ತಿಳಿಸಿದೆ. ಕನ್ನಡ ಕಲಿಯಲು ಅನುಕೂಲವಾಗುವಂತೆ ಸುಮಾರು ೫೦,೦೦೦ ಸಿ.ಡಿ ಗಳನ್ನು ಉಚಿತವಾಗಿ ಹಂಚಲು ನಿರ್ಧರಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಸುಮಾರು ಶೇಕಡ ೩೦ ರಷ್ಟು ಪರಭಾಷಿಕರಿಗೆ ಕನ್ನಡ ಕಲಿಸುವ ಉದ್ದೇಶವನ್ನೂ ಸಹ ಹೊಂದಿದ್ದಾರೆ ಸಂಸ್ಥೆಯವರು. ಇದು ನಿಜಕ್ಕೂ ಅಭಿನಂದನಾರ್ಹ. ಸರ್ಕಾರ ಮಾಡುವ ಕೆಲಸವೊಂದನ್ನು ಒಂದು ಸಂಸ್ಥೆ ಮಾಡಲು ಹೊರಟಿರುವುದನ್ನು ನಾವೆಲ್ಲರೂ ಅಭಿನಂದಿಸಬೇಕಾದದ್ದು ನಮ್ಮ ಕರ್ತವ್ಯ. ಇದು ನಿಜಕ್ಕೂ ಕನ್ನಡ ಕಟ್ಟುವ ಕೆಲಸ. ಕನ್ನಡಿಗರು ಇದರ ಸದುಪಯೋಗ ಪಡಿಸಿಕೊಂಡು ತಮ್ಮ ಪರ ಭಾಷಿಕ ಸ್ನೇಹಿತರಿಗೆ ಈ ವಿಂಬಲೆ ತಾಣವನ್ನು ಪರಿಚಯಿಸುವುದರ ಮುಖಾಂತರ ಕನ್ನಡ ಸೇವೆಯನ್ನು ಮಾಡುವಂತಾಗಲಿ ಎಂದು ಆಶಿಸುತ್ತಾ……..

No comments:

Post a Comment