Sunday 25 November 2012

ವಿದೇಶಿ ನೇರ ಬಂಡವಾಳ: ಭಾಗ-೨


ಕಳೆದ ಸಂಚಿಕೆಯಿಂದ

ವಿದೇಶಿ ಬಂಡವಾಳದಿಂದ ದೇಶಕ್ಕೆ ಏನು ಪ್ರಯೋಜನ ಎಂದು ಯೋಚನೆ ಮಾಡಿದರೆ, ದೇಶಕ್ಕೆ ವಿದೇಶಿ ಬಂಡವಾಳ ಸಾವಿರಾರು ಕೋಟಿ ರೂಪಾಯಿಗಳ ಮೌಲ್ಯದಲ್ಲಿ ಹರಿದು ಬರುವುದು. ರೂಪಾಯಿಯ ಬೆಲೆ ಚೇತರಿಸಿಕೊಳ್ಳುವುದು. ಡಾಲರ್ ಮೌಲ್ಯ ಸ್ವಲ್ಪ ಮಟ್ಟಿಗೆ ಕುಸಿಯುವುದು. ಡಾಲರನ ಬೆಲೆ ಸುಮಾರು ೫೬ ಇದ್ದದ್ದು ಈಗ ೫೨/೫೩ರ ಹತ್ತಿರ ಇರುವುದನ್ನು ಕಾಣಬಹುದು. ಇದು ೪೯-೫೦ಕ್ಕೆ ಬಹುದೆಂಬ ಅಂದಾಜಿದೆ. ಉದ್ಯೋಗವಕಾಶ ಹೆಚ್ಚುವುದು. ನಿರುದ್ಯೋಗ ಕಡಿಮೆಯಾಗುವುದು. ಹೊರ ದೇಶದ ವ್ಯಾಪಾರಸ್ಥ ಸಂಸ್ಥೆಗಳು ನಮ್ಮ ದೇಶದಲ್ಲಿ ಉತ್ಪನ್ನಗಳನ್ನು ಉತ್ಪಾದಿಸಲು ಶುರುಮಾಡಿ, ಇಲ್ಲಿಂದಲೇ ಇತರೆ ದೇಶಗಳಿಗೆ ತನ್ನ ಸಾಮಾನು ಸರಂಜಾಮುಗಳನ್ನು ರಪ್ಥು ಮಾಡಬಹುದು. ದೇಶದ ರಪ್ಥು ಉದ್ಯಮ ಹೆಚ್ಚಾಗಬಹುದು. ಯಾವುದೇ ದೇಶಕ್ಕೂ ಆಮದು ಮಾಡಿಕೊಳ್ಳುವುದಕ್ಕಿಂತ ರಪ್ಥು ಹೆಚ್ಚಾದಷ್ಟು ಒಳ್ಳೆಯದು. ಭೂಮಿಯ ಬೆಲೆ ಹೆಚ್ಚಬಹುದು. ರಿಯಲ್ ಎಸ್ಟೇಟ್ ಉದ್ಯಮ ಬೆಳೆಯಬಹುದು.  ಹೊಸ ಹೊಸ ತಾಂತ್ರಿಕತೆ ದೇಶಕ್ಕೆ ಸಿಗಬಹುದು.

ಮೊದಲಿನಿಂದಲೂ ವಿದೇಶಿ ಬಂಡವಾಳ ನಮ್ಮ ದೇಶಕ್ಕೆ ಇತರೆ ಕ್ಷೇತ್ರಗಳಲ್ಲಿ ಹರಿದು ಬರುತ್ತಲೇ ಇದೆ. ಇದೇನು ಮೊದಲಂತೂ ಅಲ್ಲ, ಆದರೆ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಹೊಸದು. ಶೇಕಡ ೭೦ರಷ್ಟು ಬಂಡವಾಳವನ್ನು ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರ ವಿದೇಶಿ ಸಂಸ್ಥೆಗಳಿಗೆ ಕಲ್ಪಿಸಲು ಹೊರಟಿದೆ. ಇದನ್ನು ಜಾರಿಗೊಳಿಸುವ ನಿರ್ಧಾರವನ್ನು ಆ ರಾಜ್ಯಗಳ ಒಪ್ಪಿಗೆಗೆ ಬಿಡಲಾಗಿದೆ. ೧೦ ಲಕ್ಷ ಜನಸಂಖ್ಯೆ ಇರುವ ನಗರಗಳಲ್ಲಿ ಈ ಕಂಪನಿಗಳು ವ್ಯಾಪಾರ ಮಾಡಬಹುದೆಂದು ಸರ್ಕಾರ ತಿಳಿಸಿದೆ. ವಿಮಾನ ಯಾನ, ದೂರ ಸಂಪರ್ಕ, ಮಾಧ್ಯಮ, ವಿಮಾ, ಮತ್ತು ಪಿಂಚಣಿ ಕ್ಷೇತ್ರದಲ್ಲಿಯೂ ಸಹ ವಿದೇಶಿ ಬಂಡವಾಳವನ್ನು ಆಕರ್ಷಿಸಲು ಹೊರಟಿದೆ. ವಿಮಾನ ಯಾನ ಮತ್ತು ಸಂಪರ್ಕ ಕ್ಷೇತ್ರದಲ್ಲಿ ವಿದೇಶಿ ಬಂಡವಾಳವನ್ನು ಯಾರೂ ಹೆಚ್ಚಾಗಿ ವಿರೋಧಿಸುತ್ತಿಲ್ಲ. ಈ ಎರಡು ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹರಿದು ಬಂದರೆ ದೇಶಕ್ಕೆ ಒಳ್ಳೆಯದೆಂಬ ಭಾವನೆ ಎಲ್ಲರಲ್ಲಿಯೂ ಇದೆ. ಇದು ನಿಜ ಕೂಡ ಹೌದು. ವಿದೇಶಿ ಬಂಡವಾಳ ಈ ಎರಡು ಕ್ಷೇತ್ರದಲ್ಲಿ ಹರಿದು ಬಂದರೆ ಹೊಸ ತಂತ್ರಜ್ಞಾನ, ಹೊಸ ಕಲ್ಪನೆ, ಹೊಸ ಚಿಂತನೆಗಳು, ಉದ್ಯೋಗಾವಕಾಶ ಹೀಗೆ ಅನೇಕ ಪ್ರಯೋಜನಗಳಾಗುವುದು ಎಂದು ಮೇಲ್ನೋಟಕ್ಕೆ ಕಂಡುಬರುವುದು.

ಇದರಲ್ಲಿ ಒಳಿತು ಮತ್ತು ಕೆಡಕು ಎರಡೂ ಇದೆ. ಕೆಂದ್ರ ಸರ್ಕಾರ ಕೇವಲ ಒಳಿತನ್ನು ಮಾತ್ರ ಹೇಳುತ್ತಿದೆ. ಇದರಿಂದ ಆಗುವ ಲಾಭಗಳನ್ನು ಮಾತ್ರ ಹೇಳುತ್ತಿದೆ, ನಷ್ಟವನ್ನು ಹೇಳುತ್ತಿಲ್ಲ. ಲಾಭದ ವಿಷಯಗಳನ್ನು ಹೇಳುತ್ತಿದ್ದರೊ ಅವೆಲ್ಲವೂ ನಿಜವಲ್ಲ ಎಂಬುದನ್ನೂ ಸಹ ಗಮನಿಸಬೇಕಾಗುತ್ತದೆ. (ಮಿಕ್ಕಿದ್ದು ನಾಳೆಗೆ)

No comments:

Post a Comment