Wednesday 7 November 2012

ಫೇಸ್ ಬುಕ್ಕಾ? ಫೇಕ್ ಬುಕ್ಕಾ?? – ಭಾಗ-೪


ಕಳೆದ ಸಂಚಿಕೆಯಿಂದ

ನಾಗರಾಜ ಕಂಪ್ಯೂಟರ್ ಮುಂದೆ ಕುಳಿತುಕೊಂಡು ರಾಮರಾಯರಿಗೆ, ಒಂದು, ಸಾವಿತ್ರಮ್ಮನವರಿಗೆ ಒಂದು ಅಂತ ಎರೆಡೆರೆಡು ಈ ಮೈಲ್ ಎಡ್ರೆಸ್ ರೆಡಿ ಮಾಡಿ, ಫೇಸ್ ಬುಕ್ ನಲ್ಲಿ ಇಬ್ಬರಿಗೂ ಒಂದು ಅಕೌಂಟ್ ರೆಡಿ ಮಾಡೇಬಿಟ್ಟ ೧೫-೨೦ ನಿಮಿಷದಲ್ಲಿ. ರಾಮರಾಯರು ತಮ್ಮ ಮೊಬೈಲ್ ನಲ್ಲಿ ಆ ಸಮಯದಲ್ಲಿ ಸ್ವಲ್ಪ ದೂರ ನಿಂತು ಯಾರ ಹತ್ತಿರವೋ ಮಾತನಾಡುತ್ತಿದ್ದರು. ನಾಗರಾಜ ಒಳಗೆ ಹೋಗಿ ಸಾವಿತ್ರಮ್ಮ, ರಾಜಲಕ್ಷ್ಮಿಗೆ ತಾನು ಅಂಕಲ್, ಆಂಟಿಗೆ ಫೇಸ್ ಬುಕ್ ನಲ್ಲಿ ಒಂದು ಅಕೌಂಟ್ ಒಪನ್ ಮಾಡಿರುವುದಾಗಿಯೂ ಮತ್ತು ಅದನ್ನು ಅವರಿಗೆ ತೋರಿಸುವುದಕ್ಕಾಗಿಯೂ ಕರೆತಂದ. ಅಷ್ಟು ಹೊತ್ತಿಗೆ ರಾಮರಾಯರೂ ಅವರನ್ನು ಕೂಡಿಕೊಂಡರು.

ನಾಗರಾಜ “ನೋಡಿ ಅಂಕಲ್, ಇದು ನಿಮ್ಮ ಈ ಮೈಲ್ ಆಡ್ರೆಸ್, ಇದು ಪಾಸ್ ವರ್ಡ್, ನಿಮಗೆ ಯಾವಗಲೂ ಜ್ನಾಪಕಕ್ಕೆ ಇರಲಿ ಅಂತ ಆಂಟಿಗೆ, ಅಂಕಲ್ ಹೆಸ್ರು ಪಾಸ್ ವರ್ಡ್, ಆಂಕಲ್ ಗೆ, ಅಂಟಿ ಹೆಸ್ರು ಪಾಸ್ ವರ್ಡ್ ಕೊಟ್ಟಿದ್ದೀನಿ.  ಸರಿನಾ, ಅದ್ಸರಿ ನಿಮ್ಗೆ ಕಂಪ್ಯೂಟರ್ ನಾಲೆಡ್ಜ್ ಇದ್ಯಾ” ಅಂತ ಅನುಮಾನದಿಂದ ಕೇಳಿದ. ಅದಕ್ಕೆ ಸಾವಿತ್ರಮ್ಮ ನವರು “ಅವರಿಗೆ ಗೊತ್ತು, ನಂಗೇನೂ ಗೊತ್ತಿಲ್ಲಪ್ಪ” ಅಂದ್ರು. ರಾಜಲಕ್ಷ್ಮಿಗೆ “ಲೋ ಗೂಬೆ, ನೀನೊಬ್ಬನೇ ಬುದ್ದಿವಂತ ಅಂತ ಜಂಬ ಕೊಚ್ಚಿಕೋಬೇಡ್ವೋ” ಅಂತ ರೇಗಿಸಿದ್ಲು. “ನಂದು ಒಂದೇ ಸಾಕಿತ್ತಲ್ಲೋ ಅಂದ್ರು” ರಾಮರಾಯರು. “ಆಂಟಿನೂ ಫೇಸ್ ಬುಕ್ಕಲ್ಲಿ ಇರ್ಲಿ ಬಿಡಿ ಅಂಕಲ್” ಅಂದ ನಾಗರಾಜ.

“ನೋಡಿ ಅಂಕಲ್ ಇದು ನಿಮ್ಮ ಫೇಸ್ ಬುಕ್, ಇದ್ರಲ್ಲಿ ನಿಮ್ಮ ಹೆಸರನ್ನು ರಾಮರಾಯರು ಅನ್ನು ಬದಲು ರಮೇಶ್ ಅಂತ ಮಾಡಿದ್ದೇನೆ, ಆಂಟಿ ಹೆಸ್ರನ್ನು ಸಂಗೀತ ಅಂತ ಮಾಡಿದ್ದೇನೆ”, ಸ್ಟೇಟಸ್ ಅಲ್ಲಿ ಅಂಕಲ್ನ ಬ್ಯುಸಿನೆಸ್ ಮ್ಯಾನ್ ಮಾಡಿ ಏಜ್ ೨೫ ಅಂತ ಹಾಕಿದ್ದೀನಿ. ಇನ್ನು ಆಂಟಿನ ಫ್ಯಾಶನ್ ಡಿಸೈನರ್ ಮಾಡಿ, ಅವರ ಏಜ್ ೨೪ ಮಾಡಿದ್ದೀನಿ. ನಿಮ್ಮ ಫೋಟೋ ಬದಲು ಬಾಂಬೆ ಮಾಡಲ್ ಒಬ್ಬನ ಫೋಟೊ ಹಾಕಿದ್ದೇನೆ, ಹಾಗೇ ಆಂಟಿಗೂ ಬಾಂಬೆ ಮಾಡೆಲ್ ಫೋಟೋ ಹಾಕಿದ್ದೀನಿ” ಅಂತ ತನ್ನ ಘನಂದಾರಿ ಕೆಲಸದ ಬಗ್ಗೆ ಹೇಳಿಕೊಳ್ಳುತ್ತಿದ್ದ.  “ಕೊನೆಗೂ ನೀನು ನಿನ್ನ ಕಚಡಾ ಬುದ್ದಿ ಬಿಡಲಿಲ್ಲ, ಅಂಕಲ್, ಆಂಟಿ ಗೆ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ಯಾ, ನಾಚಿಕೆ ಆಗಲ್ವಾ ನಿನಗೆ, ಲೋಫರ್ ನೀನು, ನಿನ್ನ ಬುದ್ದಿ ಎಲ್ಲಿ ಬಿಡ್ತ್ಯಾ. ಕಚಡಾ ನೀನು” ಅಂತ ಬಯ್ಯುತ್ತಿದ್ದಳು ರಾಜಲಕ್ಷ್ಮಿ. ಸಾವಿತ್ರಮ್ಮನವರಿಗೆ ಏನೂ ಅರ್ಥ ಆಗದೆ ರಾಮರಾಯರ ಮುಖ ನೋಡಿದ್ರು. ರಾಮರಾಯರಿಗೆ ಅರ್ಥ ಆಯ್ತು ಇವನು ಮಾಡಿದ ಕಾರ್ನಾಮ.

ರಾಮರಾಯರು “ಹೋಗ್ಲಿ ಬಿಡಮ್ಮ ನನಗೂ ಇದರ ಬಗ್ಗೆ ಜಾಸ್ತಿ ಗೊತ್ತಿಲ್ಲ. ಅದನ್ನ ನಾನೇನೂ ಮೈಂಟೇನ್ ಮಾಡಲ್ಲ. ಇದರ ಬಗ್ಗೆ ಕೇಳಿದ್ದೆ. ಅದು ಹೇಗೆ ವರ್ಕ್ ಆಗತ್ತೆ ಅಂತ ನಂಗೆ ಗೊತ್ತಾಗಬೇಕಿತ್ತು ಆಷ್ಟೇ., ಇದನ್ನು ಡಿಲೀಟ್ ಮಾಡ್ಬಿಡು ಆಮೇಲೆ ಅಂತ ಹೇಳಿ ಅವನ ಕಡೆ ತಿರುಗಿ “ಇದು ಹೇಗೆ ವರ್ಕ್ ಆಗತ್ತೆ ತೋರಿಸೋ” ನಾಗರಾಜ ಅಂದ್ರು. ನಾಗರಾಜ ನಾಚಿಕೆಯಿಂದ ತಲೆ ತಗ್ಗಿಸಿದ. ಮುಖ ಪೆಚ್ಚಾಗಿತ್ತು. ಅಂಕಲ್ ಎಲ್ಲಿ ಬಯ್ಯುತ್ತಾರೋ ಅಂತಿದ್ದವನಿಗೆ ಜೀವ ಬಂದಂಗಾಯ್ತು. ರಾಮರಾಯರು “ಕಮಾನ್ ಮೈ ಬಾಯ್, ಟೇಕ್ ಇಟ್ ಈಸಿ, ನೋ ಪ್ರಾಬ್ಲಂ” ಅಂದ್ರು. (ಮಿಕ್ಕಿದ್ದು ನಾಳೆಗೆ)

No comments:

Post a Comment