Tuesday 6 November 2012

ಫೇಸ್ ಬುಕ್ಕಾ? ಫೇಕ್ ಬುಕ್ಕಾ?? – ಭಾಗ-೩


ಕಳೆದ ಸಂಚಿಕೆಯಿಂದ

“ಇಷ್ಟೇ ಅಂಕಲ್” ಅಂದ್ಲು ರಾಜಲಕ್ಷ್ಮಿ. “ಮತ್ತೆ ಈಗ ನಿಮ್ಮ ಪ್ರಾಬ್ಲಂ ಏನು? ನೀವು ಯಾಕೆ ಜಗಳ ಆಡ್ತಿದ್ರಿ?” ಅಂತ ರಾಮರಾಯರು ಕೇಳಿದ್ರು. “ಅವನು ನನಗೆ ಮೋಸ ಮಾಡ್ದ, ಯಾಕೆ ಅಂತ ಆ ಗೂಬೆನ್ನ ಕೇಳಿ” ಅಂತ ಪುನಃ ಅಳಕ್ಕೆ ಶುರು ಮಾಡಿದ್ಲು. “ಸರಿ, ಅಳ್ಬೇಡ, ನೋಡು ನೀನು ಸುಳ್ಳು ಹೆಸರಿಂದ, ಅವನಿಗೆ ಬರೀ ಸುಳ್ಳು ಹೇಳಿ ಮೋಸ ಮಾಡ್ದೆ. ಅವನೂ ಹಾಗೇ ಮಾಡ್ದ, ಸರಿ ಹೋಯಿತು, ಇಬ್ಬರೂ ನಿಮ್ಮ ನಿಮ್ಮ ಸುಳ್ಳಿನ ಬಲೆಯಿಂದ ಸಿಕ್ಕಾಕೊಂಡು ನೀನು ಮೋಸ ಮಾಡ್ದೆ, ನೀನು ಮೋಸ ಮಾಡ್ದೆ ಅಂತ ಕೂಗಾಡಿ, ಜಗಳ ಮಾಡಿಕೊಂಡರೆ ನಿಮ್ಮ ಪ್ರಾಬ್ಲಂ ಸಾಲ್ವ್ ಆಗತ್ತಾ?, ಆಗಲ್ಲಾ ಅಲ್ವಾ, ಅದಕ್ಕೆ ನೀವು ಒಂದು ಕೆಲ್ಸ ಮಾಡಿ ಇನ್ಮೇಲೆ ಜಗಳ ಗಿಗಳ ಎಲ್ಲಾ ಬಿಟ್ಟಾಕಿ ಇಬ್ಬರೂ ಫ್ರೆಂಡ್ಸ್ ಆಗ್ರಿ ಆಯ್ತಾ?” ಅಂತ ಕೇಳಿದ್ರು. ಇಬ್ಬರೂ ಒಬ್ಬರ ಮುಖವನ್ನು ಒಬ್ಬರು ನೋಡ್ಕೊಂಡು ಮೆಲ್ಲಗೆ ನಕ್ಕು ಹ್ಯಾಂಡ್ ಶೇಕ್ ಮಾಡಿಕೊಂಡರು. “ನೋಡಿ ಈಗ ನೀವು ಜಾಣ ಮಕ್ಕಳು” ಅಂದ್ರು ರಾಮರಾಯರು.

 “ಲೇ, ಸಾವಿತ್ರಿ ಮಕ್ಕಳು ಇಲ್ಲೇ ಊಟ ಮಾಡ್ಲಿ, ಅವರಿಗೆ ಊಟಕ್ಕೆ ಅರೇಂಜ್ ಮಾಡು” ಅಂತ ಹೇಳಿ, ಏನೋ ಜ್ನಾಪಿಸಿಕೊಂಡವರಂತೆ ನಂಗೆ ನಿಮ್ಮ ಕಥೆಯಲ್ಲಿ ಕೆಲವು ಅರ್ಥ ಆಗಿಲ್ಲ. ಅದೆಲ್ಲಾ ನೀವು ಕ್ಲಿಯರ್ ಮಾಡಿದ್ರೆ ಮಾತ್ರ ಊಟ, ಇಲ್ಲದಿದ್ರೆ ಇಲ್ಲಾ, ಸರೀನಾ” ಅಂದ್ರು. “ಏನೋ ಬೇಕೋ ಕೇಳಿ ಕ್ಲಿಯರ್ ಮಾಡ್ತೀವಿ, ಆದ್ರೆ ಊಟ ಬೇಡ ಅಂಕಲ್” ಅಂದ್ಲು ರಾಜಲಕ್ಷಿ. ಸಾವಿತ್ರಿ “ನೋಡಮ್ಮಾ ನಿಮ್ಮನ್ನು ನೋಡಿದ್ರೆ ನನ್ನ ಮೊಮ್ಮಕ್ಕಳನ್ನ ನೋಡಿದ ಹಾಗೆ ಆಗತ್ತೆ, ಇಲ್ಲೇ ಊಟ ಮಾಡಿ, ನಾವಿರೋದೇ ಇಬ್ರು ಇಲ್ಲಿ, ನೀವು ನಮ್ಮ ಮನೆಗೆ ಹೊಸ್ದಾಗಿ ಬಂದಿದ್ದೀರಿ, ನಮ್ಮ ಮುಂದೆ ನಿಮ್ಮ ಕಥೆಯನ್ನೆಲ್ಲಾ ಹೇಳಿದ್ರಿ, ನಮಗೂ ಸಂತೋಷ ಆಯ್ತು. ಊಟ ಮಾಡಿದ್ರೆ ಇನ್ನೂ ಸಂತೋಷ ಆಗತ್ತೆ” ಅಂದ್ರು. “ಸರಿ ಆಂಟಿ, ಕತ್ತಲಾಗ್ತಾ ಇದೆಯಲ್ಲಾ, ಆಮೇಲೆ ಬಸ್ ಸಿಗ್ದೆ ಇದ್ರೆ ಪ್ರಾಬ್ಲಂ ಆಗತ್ತೆ” ಅಂತ ರಾಗ ಎಳೆದಳು. “ಮನೆಗೆ ಫೋನ್ ಮಾಡಿ ಲೇಟ್ ಆಗತ್ತೆ” ಅಂತ ಹೇಳು, ನಾನು ಆಂಟಿ ನಿಮ್ಮ ಮನೆಗೆ ಡ್ರಾಪ್ ಮಾಡ್ತೀವಿ, ಎಲ್ಲರೂ ಕಾರ್ ನಲ್ಲಿ ಹೋಗೋಣ” ಅಂದ್ರು ರಾಮರಾಯರು. ಒಪ್ಪಿಕೊಂಡಳು ರಾಜಲಕ್ಷ್ಮಿ. ತಲೆಯಾಡಿಸಿದ ನಾಗರಾಜ. “ಆಂಟಿ ನಿಮಗೆ ಹೆಲ್ಪ್ ಮಾಡ್ತೀನಿ” ನಡೀರಿ, ಅಡುಗೆ ಮನೆ ತೋರ್ಸಿ, ಹಾಗೆ ನಿಮ್ಮ ಬಗ್ಗೆನೂ ಹೇಳಿ” ಅಂದ್ಲು.

“ಏ ಗೂಬೆ, ಅಂಕಲ್ ಏನು ಕೇಳ್ತಾರೋ ಅವರಿಗೆ ಸರಿಯಾಗಿ ಹೇಳು, ಚೋಡ್ ಗೀಡ್ ಬಿಡ್ಬೇಡ” ಅಂತ ಮೆಲ್ಲಗೆ ಕಣ್ಣು ಹೊಡೆದಳು. “ಏ ಕೋತಿ, ಹೋಗೇ, ದೊಡ್ಡದಾಗಿ ಹೇಳಕ್ಕೆ ಬಂದುಬಿಟ್ಲು” ಅಂದ”. “ನಿಮ್ಮನ್ನು ನೋಡ್ತಾ ಇದ್ರೆ ನಂಗೆ ಖುಷಿ ಆಗತ್ತೆ ಕಣಯ್ಯಾ, ಎಷ್ಟು ಚೆನ್ನಾಗಿ ಜಗಳ ಆಡ್ತೀರಾ, ಹೀಗಿರಬೇಕು. ಎಲ್ಲಿ ಜಗಳ ಇರತ್ತೋ, ಆಲ್ಲಿ ಪ್ರೀತಿ, ಸ್ನೇಹ, ವಿಶ್ವಾಸ ಎಲ್ಲಾ ಜಾಸ್ತಿ ಇರತ್ತೆ” ಅಂದ್ರು ರಾಮರಾಯರಿಗೆ “ಈಗ ಕೇಳಿ ಏನು ಡೌಟು ನಿಮಗೆ” ಅಂದ ನಾಗರಾಜ ಅಂಕಲ್ಗೆ.

 “ಫ಼ಸ್ಟ್, ಅದು ಏನೋ ಬಿಳಿ ಕಾಗೆ, ಕಪ್ಪು ಕಾಗೆ, ಕಾಗೆ ಗ್ರೂಪ್ ಅಂದ್ರಲ್ಲಾ ಏನು, ಹಾಗಂದ್ರೆ” ಅಂತ ಕೇಳಿದ್ರು ರಾಮರಾಯರು. “ಅದಾ ಅಂಕಲ್, ಏನಿಲ್ಲ ಬಿಳಿ ಕಾಗೆ ಅಂದ್ರೆ ಹುಡುಗಿಯರಿಗೆ ಇಟ್ಟ ಅಡ್ಡ ಹೆಸರು” ಅಂದ. “ಕರಿ ಕಾಗೆ ಅಂದ್ರೆ ಈ ಗೂಬೆ ಮುಂಡೇವಕ್ಕೆ ನಾವು ಹುಡುಗಿಯರು ಇಟ್ಟ ಹೆಸ್ರು” ಅಂತ ಇನ್ನೂ ಅಲ್ಲೇ ಇದ್ದ ರಾಜಲಕ್ಷ್ಮಿ ನಗ್ತಾ ಹೇಳೀದ್ಲು, “ಕಾಗೆ ಗ್ರೂಪ್ ಅಂದ್ರೆ ನಮ್ಮ ಹಾಗೇ ಇರೋ ಯಂಗ್ಸ್ ಸ್ಟರ್ ಗ್ರೂಪೊಂದು ಫೇಸ್ ಬುಕ್ಕಲ್ಲಿದೆ. ಸುಮಾರು ಎಂಟು ಸಾವಿರ ಜನ ಇದೀವಿ ಆ ಗ್ರೂಪಲ್ಲಿ” ಅಂದ. “ಇನ್ನು ಫೇಸ್ ಬುಕ್, ಅಂದ್ರೆ?” ಅಂತ ಕೇಳಿದ್ರು ರಾಮರಾಯರು. ಫೇಸ್ ಬುಕ್ ಅಂದ್ರೆ ಅದು ಸೋಷಿಯಲ್ ನೆಟ್ ವರ್ಕ್, ಅದ್ರಲ್ಲಿ ಯಾರು ಬೇಕಾದರೂ ಒಂದು ಅಕೌಂಟ್ ತೆಗೆದು ಅವರ ಇಷ್ಟದ ಫೋಟೊ, ಅವರು ಬರೆದ ಕವನ, ಮತ್ತೆ ಅವರಿಗೆ ಇಷ್ಟವಾದ ಯಾವುದಾದರೂ ವಿಷ್ಯ ಸ್ನೇಹಿತರೊಂದಿಗೆ ಹಂಚ್ಕೋಬಹುದು. ನೀವು ಕೂಡ ಬೇಕಾದ್ರೆ ಒಂದು ಅಕೌಂಟ್ ತೆಗೀಬೋದು, ಆಂಟೀದೂ ಕೂಡ. ನಿಮ್ಮ ಹತ್ರ ಕಂಪ್ಯೂಟರ್, ಇದ್ಯಾ, ಇಂಟರ್ನೆಟ್ ಕನೆಕ್ಷನ್ ಇದ್ರೆ ಅದು ಹೇಗೆ ವರ್ಕ್ ಆಗತ್ತೆ ಅಂತ ನಿಮ್ಗೆ ತೋರಿಸ್ತೀನಿ” ಅಂದ ಸತೀಶ ಒಂದೇ ಉಸ್ರಿಗೆ. ಅದೇನನ್ನಿಸಿತೋ ಅಂಕಲ್ ಗೆ “ನಂದೊ ಒಂದು ಅಕೌಂಟ್ ಓಪನ್ ಮಾಡಿಕೊಡು ಅದ್ರಲ್ಲಿ ಅಂತ ಹೇಳಿ ಅಲ್ಲೇ ಇದ್ದ ಕಂಪ್ಯೂಟರ್ ತೋರಿಸಿದ್ರು” ರಾಮರಾಯರು. (ಮಿಕ್ಕಿದ್ದು ನಾಳೆಗೆ)

No comments:

Post a Comment